ಮೂಲಸೌಕರ್ಯ

ಕಟ್ಟಡ

ತರಗತಿ ಕೊಠಡಿಗಳು:

ಬೋಧನೆ ಮತ್ತು ಕಲಿಕೆಯನ್ನು ಉತ್ತೆÃಜಿಸಲು ಉತ್ತಮ ಸೌಲಭ್ಯಗನ್ನೊಳಗೊಂಡ ಭೌತಿಕ ಕಟ್ಟಡ ಅತ್ಯವಶ್ಯಕ. ಕಾಲೇಜು ಗಾಳಿ-ಬೆಳಕು ಉತ್ತಮವಾಗಿರುವ ವಿಶಾಲವಾದ ಸಾಕಷ್ಟು ತರಗತಿ ಕೊಠಡಿಗಳನ್ನು ಹೊಂದಿದೆ. ಆಧುನಿಕ ಪೀಠೋಪಕರಣಗಳು, ಹಸಿರು ಮತ್ತು ಬಿಳಿ ಬೋರ್ಡ್ಗಳನ್ನು ಅಳವಡಿಸಿದೆ.

ಅಭ್ಯಾಸಕೊಠಡಿ:

ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಅವಶ್ಯವಾಗಿರುವ ಸುಸಜ್ಜಿತ ಗ್ರಂಥಾಲಯದೊಂದಿಗೆ ಅಭ್ಯಾಸಕೊಠಡಿಯನ್ನು ಸ್ಥಾಪಿಸಲಾಗಿದೆ. ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಎಲೆಕ್ಟಾçನಿಕ ಸಾಧನಗಳನ್ನು ಒಳಗೊಂಡಿದೆ.

ಗ್ರಂಥಾಲಯ:

ಗ್ರಂಥಾಲಯವು ನಿಗದಿತ ಪಠ್ಯವಿಷಯಗಳಿಗೆ ಮತ್ತು ಪ್ರಚಲಿತ ವಿಷಯಗಳಿಗೆ ಸಂಬಂಧಿಸಿದ ಸಾಕಷ್ಟು ಸಂಖ್ಯೆಯ(10500) ಪುಸ್ತಕಗಳ ಸಂಗ್ರಹವನ್ನು ಹೊಂದಿದೆ. ಹಲವಾರುಆಕರ ಗ್ರಂಥಗಳು, ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ.

 

ಗಣಕಯಂತ್ರ ಪ್ರಯೋಗಾಲಯ:

ಪ್ರತಿಯೊಬ್ಬ ವಿದ್ಯಾರ್ಥಿಗೂ ಲಭ್ಯವಾಗುವಂತೆ ಮಾಹಿತಿ ತಂತ್ರಜ್ಞಾನ ಕ್ಷೆÃತ್ರಕ್ಕೆ ಸಂಬಂಧಿಸಿದಂತೆ ಗಣಕಯಂತ್ರ ಪ್ರಯೋಗಾಲಯವನ್ನು ವ್ಯವಸ್ಥೆಗೊಳಿಸಿದೆ.

ಆಟ ಮತ್ತು ಕ್ರೀಡೆಗಳು

ಆರೋಗ್ಯಕರವಾದ ಶರೀರ ಮತ್ತು ಮಾನಸಿಕ ಅಭಿವೃದ್ಧಿಗೆ ಆಟ ಮತ್ತು ಕ್ರೀಡೆಗಗಳು ಪ್ರಮುಖ ಪಾತ್ರವಹಿಸುತ್ತವೆ. ನಮ್ಮ ಕಾಲೇಜಿನಲ್ಲಿ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಥ್ರೊÃಬಾಲ್, ಬ್ಯಾಡ್ಮಿಂಟನ್, ಕಬಡ್ಡಿ, ಚೆಸ್, ಕೇರಮ್, ಮತ್ತು ಖೋಖೋ ಕ್ರಿÃಡೆಗಳ ಸೌಲಭ್ಯವನ್ನು ದಿನನಿತ್ಯದ ವ್ಯಾಯಾಮದೊಂದಿಗೆ ಒದಗಿಸಲಾಗಿದೆ.